Kannada Movies & Reviews

Sarse Ninna Seraga Sarse Kannada Song | KD |ಜೋಗಿ ಪ್ರೇಮ್‌ಗೆ ನೆಟ್ಟಿಗರ ಚಾಟಿ!

Sarse Ninna Seraga Sarse Kannada Song | KD |ಜೋಗಿ ಪ್ರೇಮ್‌ಗೆ ನೆಟ್ಟಿಗರ ಚಾಟಿ!

Stars - Simple Suni

1 Star2 Stars3 Stars4 Stars5 Stars (No Ratings Yet)
Loading...

Sarse Ninna Seraga Sarse Kannada Song | KD |ಜೋಗಿ ಪ್ರೇಮ್‌ಗೆ ನೆಟ್ಟಿಗರ ಚಾಟಿ!

 

ಅಮ್ಮನ ಬಗ್ಗೆ ಮನಸೂರೆಗೊಳ್ಳುವ ಹಾಡು ಬರೆದ ಅದೇ ಕೈಯಿಂದ ಇಂತಹ ಸಾಹಿತ್ಯವೇ? ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

Sarse Ninna Seraga Sarse Kannada Song | KD |
Sarse Ninna Seraga Sarse Kannada Song | KD |

ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ ಸಿನಿಮಾ ‘ಕೆಡಿ ದಿ ಡೆವಿಲ್’ನ ‘ಸರ್ಸೆ ಸೆರಗ ಸರ್ಸೆ’ ಹಾಡು ಬಿಡುಗಡೆಯಾದ ತಕ್ಷಣವೇ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಹಾಡು ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರ ತೀವ್ರ ವಿರೋಧ ವ್ಯಕ್ತವಾಗಿದೆ.

ಸಾಮಾನ್ಯವಾಗಿ ಪ್ರೇಮ್ ಸಿನಿಮಾಗಳಿಗೆ ಹಾಗೂ ಅವರ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುತ್ತದೆ. ಆದರೆ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಚಿತ್ರದ ಈ ಹೊಸ ಹಾಡು ಅಭಿಮಾನಿಗಳ ನಿರೀಕ್ಷೆಗಳನ್ನು ಮೀರಲಿಲ್ಲ. ಹಾಡಿನ ಸಾಹಿತ್ಯದಲ್ಲಿ ಅಶ್ಲೀಲತೆ ಹಾಗೂ ಡಬಲ್ ಮೀನಿಂಗ್ ಅಂಶಗಳಿವೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕುಟುಂಬ ಸಮೇತ ಕೇಳಲು ಯೋಗ್ಯವಾಗಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. ಕೇವಲ ಪ್ರಚಾರಕ್ಕಾಗಿ ಇಂತಹ ಪದ ಬಳಕೆ ಸರಿಯಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವೀರಕ ಪುತ್ರ ಶ್ರೀನಿವಾಸ್ ತಮ್ಮ ಅಸಮಾಧಾನವನ್ನು ಹಂಚಿಕೊಂಡು, “ಪ್ರೇಮ್ ಅವರ ಹಾಡುಗಳ ಅಭಿಮಾನಿ ನಾನು. ಆದರೆ ಈ ಬಾರಿ ನಿರಾಶೆಯಾಗಿದೆ. ಹಿಂದಿನ ಹಾಡಿನಲ್ಲಿಯೂ ಕೆಲವು ಪದ ಬಳಕೆ ಬಗ್ಗೆ ನಾನು ಗಮನಕ್ಕೆ ತಂದಿದ್ದೆ. ಈಗ ‘ಸರ್ಸೆ ಸರ್ಸೆ’ ಹಾಡು ಅವರ ಮಟ್ಟಕ್ಕೆ ತಕ್ಕದ್ದಲ್ಲ. ಆದ್ದರಿಂದ ನಾನು ನನ್ನದೇ ರೀತಿಯಲ್ಲಿ ಈ ಹಾಡಿಗೆ ಹೊಸ ಸಾಹಿತ್ಯ ಬರೆದು ಹಂಚಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.

ಇನ್ನೂ ಕೆಲವರು, “ಹಂಸಲೇಖ ಅವರಂತಹ ಅನುಭವಿಗಳೇ ಸಾವಿರಾರು ಹಾಡುಗಳಲ್ಲಿ ಇಂತಹ ಮಟ್ಟದ ಸಾಹಿತ್ಯ ಬಳಸಿಲ್ಲ. ಪ್ರೇಮ್ ಅವರಿಂದ ಇಂತಹ ಪದ ಬಳಕೆ ನಿರೀಕ್ಷಿಸಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ನೆಟ್ಟಿಗ, “ಒಮ್ಮೆ ‘ತಾಯಿ’ ಬಗ್ಗೆ ಮನಮುಟ್ಟುವ ಹಾಡು ಬರೆದ ವ್ಯಕ್ತಿಯಿಂದ ಇಂತಹ ಹಾಡು ಬರಬಹುದು ಎಂದು ನಂಬಲು ಆಗುವುದಿಲ್ಲ. ಶೃಂಗಾರ ಮತ್ತು ಅಶ್ಲೀಲತೆಯ ನಡುವೆ ಇರುವ ಗಡಿ ದಾಟಲಾಗಿದೆ. ಕನ್ನಡ ಸಾಹಿತ್ಯದ ಗೌರವಕ್ಕೆ ಧಕ್ಕೆ ತರುವಂತಿದೆ” ಎಂದು ತೀವ್ರವಾಗಿ ಟೀಕಿಸಿದ್ದಾರೆ.

ಒಟ್ಟಾರೆ, ‘ಸರ್ಸೆ ಸೆರಗ ಸರ್ಸೆ’ ಹಾಡಿನ ಸಾಹಿತ್ಯದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು, ಪ್ರೇಮ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧದ ಸ್ವರಗಳು ಜೋರಾಗಿವೆ.

More Like This:-

Landlord Kannada Movie- ಮಾರ್ಚ್ 19ರಿಂದ ಜೀ5 ಒಟಿಟಿಯಲ್ಲಿ ‘ಲ್ಯಾಂಡ್​ಲಾರ್ಡ್’ ಸಿನಿಮಾ ಪ್ರಸಾರ

Raghavendra Rajkumar shares his words after watching Puneeth Rajkumar movie Akasha

ದುನಿಯಾ ಸೂರಿ ಹೊಸ ಸಿನಿಮಾ: ಯುವ ರಾಜ್‌ಕುಮಾರ್ ಪ್ರಾಜೆಕ್ಟ್ ನಿಂತು, ಧ್ರುವ ಸರ್ಜಾ ಜೊತೆ ಹೊಸ ಯೋಜನೆ!

Sarse Ninna Seraga Sarse Kannada Song | KD |

Sarse Ninna Seraga Sarse Kannada Song | KD |ಜೋಗಿ ಪ್ರೇಮ್‌ಗೆ ನೆಟ್ಟಿಗರ ಚಾಟಿ!

Rakkasapuradhol

Rakkasapuradhol Review : ರಕ್ಕಸಪುರದೋಳ್’ ಸಿನಿಮಾ ವಿಮರ್ಶೆ

Hansika Motwani Divorces Sohail Kathuria

Scroll to Top